12, December-2024

    ಆತ್ಮೀಯರೇ,

    ಭಾರತದ  ಸ್ವಿಟ್ಜರ್ಲ್ಯಾಂಡ್ ಎಂದು ಪ್ರಖ್ಯಾತವಾಗಿರುವ ಕರ್ನಾಟಕ ಕಾಫಿ ಕಂಪಿನ ನಾಡು ನಿತ್ಯ ಹರಿದ್ವರ್ಣ ಕಾಡುಗಳು ಮನಮೋಹಕ ಸುಂದರ ಪರ್ವತ ಶ್ರೇಣಿಗಳ ಸಾಲು ಹಸಿರು ವನಸಿರಿಯ ಸ್ವರ್ಗ ಚಿಕ್ಕಮಗಳೂರಿನಲ್ಲಿ ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಎಂಬ ಸಹಕಾರ ತತ್ವದ ಧ್ಯೆಯ ವಾಕ್ಯದೊಂದಿಗೆ ಸ್ಥಾಪಿತವಾಗಿರುವ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ  ಬ್ಯಾಂಕಿಗೆ ನಿಮಗೆಲ್ಲರಿಗೂ ಆದರದ ಸುಸ್ವಾಗತ . 

    ಚಿಕ್ಕಮಗಳೂರು ಜಿಲ್ಲೆಯು ಸುಮಧುರ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದ್ದು ಪ್ರವಾಸಿಗರ ಸ್ವರ್ಗವಾಗಿದೆ . ಕರ್ನಾಟಕದ ಕಾಫಿನಾಡು ಚಿಕ್ಕಮಗಳೂರು ಗಗನ ಚುಂಬಿ ಪರ್ವತ ಶ್ರೇಣಿ ಗಳನ್ನು ಹೊಂದಿದ್ದು, ಅನೇಕ ಜಲಪಾತಗಳನ್ನು, ನಿತ್ಯಹರಿದ್ವರ್ಣ ಕಾಡುಗಳನ್ನು,ಪವಿತ್ರ ಸುಂದರ ಧಾರ್ಮಿಕ ಕ್ಷೇತ್ರಗಳನ್ನು  ಹಾಗೂ  ಮನಮೋಹಕವಾದ ಗಿರಿಧಾಮಗಳನ್ನು ಹೊಂದಿರುತ್ತದೆ.ಈ ಜಿಲ್ಲೆಯು ಒಟ್ಟು ೮ ತಾಲ್ಲೂಕುಗಳನ್ನು ಹೊಂದಿದ್ದು ಮಲೆನಾಡು ಮತ್ತು ಅರೆ  ಮಲೆನಾಡು ಭೂ ಪ್ರದೇಶವನ್ನು ಹೊಂದಿದ್ದು  ಕಾಫಿ, ಅಡಿಕೆ ,ತೆಂಗು ,ಮೆಣಸು, ಕಿತ್ತಳೆ ,ಬಾಳೆ,ಈರುಳ್ಳಿ, ರಾಗಿ ಮತ್ತು ಭತ್ತದ  ಬೆಳೆಗಳಿಗೆ ಹೆಸರುವಾಸಿ ಆಗಿದೆ.

     

    ಭಾರತದಿಂದ ವಿದೇಶಕ್ಕೆ ರಫ್ತಾಗುವ ಉತ್ಕೃಷ್ಟ ಗುಣಮಟ್ಟದ  ಕಾಫಿಯನ್ನು ಚಿಕ್ಕಮಗಳೂರಿನಲ್ಲಿಯೇ ಬೆಳೆಯುತ್ತಿರುವುದು ಜಿಲ್ಲೆಯ  ಹೆಗ್ಗಳಿಕೆಯಾಗಿದೆ . ಕಾಫಿ ಸಂಶೋಧನಾ ಕೇಂದ್ರವೂ ಸಹ ಚಿಕ್ಕಮಗಳೂರಿನಲ್ಲಿಯೇ  ಇದೆ. ಕರ್ನಾಟಕದ ಹಲವು ಜೀವ ನದಿಗಳಾದ ತುಂಗಾ ,ಭದ್ರ ,ಹೇಮಾವತಿ ,ನೇತ್ರಾವತಿ ಹಾಗೂ ಯಗಚಿ ನದಿಗಳ   ಉಗಮ ಸ್ಥಾನವಾಗಿದೆ. ಕರ್ನಾಟಕದ ೨ನೇ ಎತ್ತರದ ಗಿರಿ ಶಿಖರ ಮುಳ್ಳಯ್ಯನಗಿರಿ ನಮ್ಮ ಜಿಲ್ಲೆಯಲ್ಲಿ ಇದೆ  ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತದೆ . ಪುರಾತನ ಕೆರೆಗಳಾದ ಅಯ್ಯನಕೆರೆ ಮತ್ತು ಮದಗದ ಕೆರೆಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಇದ್ದು ಇವು ಜಿಲ್ಲೆಯ ರೈತರ ಜೀವನಾಡಿಗಳಾಗಿವೆ. 

    ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ  ಬ್ಯಾಂಕ್  ೧೯೫೫ ರಲ್ಲಿ ಕೆಲವೇ ಶಾಖೆಗಳೊಂದಿಗೆ  ಪ್ರಾರಂಭಗೊಂಡು ಅಂದಿನಿಂದ ಇಂದಿನವರೆಗೆ ಹಿರಿಯ ಸಹಕಾರಿಗಳನ್ನು  ನೆನೆಯುತ್ತಾ , ಅವರು ನಡೆಸಿದ ಹಾದಿಯಲ್ಲಿ  ದಕ್ಷ ಆಡಳಿತ, ಪ್ರಜ್ಞಾವಂತ ಸದಸ್ಯ ಗ್ರಾಹಕರು, ಬ್ಯಾಂಕಿನ ಮೇಲೆ ಇಟ್ಟ ವಿಶ್ವಾಸ, ನಂಬಿಕೆ ಮತ್ತು ನಿಷ್ಟಾವಂತ ಸಿಬ್ಬಂದಿಗಳು ಸಲ್ಲಿಸಿರುವ ಸೇವೆಯಿಂದ ಚಿಕ್ಕಮಗಳೂರು ಜಿಲ್ಲಾ ಬ್ಯಾಂಕು ೬೭ ವರ್ಷಗಳ ಸಾರ್ಥಕ ಸೇವೆಯೊಂದಿಗೆ ಯಶಸ್ವಿಯಾಗಿ ಮುನ್ನೆಡೆದು ಇಂದು ೨೮ ಶಾಖೆಗಳೊಂದಿಗೆ ಹೆಮ್ಮರವಾಗಿ ಬೆಳೆಯುತ್ತಿದೆ. ಜಿಲ್ಲಾ ಸಹಕಾರ ಕೇಂದ್ರ  ಬ್ಯಾಂಕ್ ಭಾರತೀಯ  ರಿಸೆರ್ವ್ ಬ್ಯಾಂಕ್  ಲೈಸನ್ಸ್ ಹೊಂದಿದ್ದು ಅದರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ . ವರದಿ ವರ್ಷದಲ್ಲಿ ೨೮ ಶಾಖೆಗಳಿಂದ ….. ರೈತ ಸದಸ್ಯರಿಗೆ ರೂ ೧೦೬೩ ಕೋಟಿ ಕೃಷಿ ಸಾಲ ನೀಡಿದ್ದು, ಆರ್ಥಿಕ ವರ್ಷದಲ್ಲಿ ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಸಾಲ ವಸೂಲಾತಿಯಲ್ಲಿ ಗಮನಾರ್ಹ ಸಾಧನೆ ಮಾಡಿ ರೂ ೫.೧೧ ಕೋಟಿಗಳ ಲಾಭವನ್ನು ಹೊಂದಿ ಬ್ಯಾಂಕು ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುತ್ತಿದೆ. ಸದಸ್ಯರ ಠೇವಣಿಗಳಿಗೆ ವಿಮೆಯ ಭದ್ರತೆಯನ್ನು ಕಲ್ಪಿಸಲಾಗಿದೆ . ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಖ್ಯವಾಗಿ ಕೃಷಿಗೆ ಹೆಚ್ಚು ಆದ್ಯತೆ ನೀಡಿ,ಹೈನುಗಾರಿಕೆ, ಸ್ವ ಸಹಾಯ ಸಂಘಗಳು ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿರುತ್ತದೆ. ಅಲ್ಲದೇ ಸಹಕಾರ ಸಂಸ್ಥೆಗಳ ಬಲವರ್ಧನೆಗೂ ಹೆಚ್ಚಿನ ಸಹಕಾರ ನೀಡಲಾಗಿದೆ. ತಮ್ಮೆಲ್ಲರ ಹೆಮ್ಮೆಯ ‘ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ  ಬ್ಯಾಂಕು  ಜಿಲ್ಲೆಯ ರೈತರ ಹಲವಾರು ರಚನಾತ್ಮಕ ಚಟುವಟಿಕೆಗಳ ಕೇಂದ್ರ ಬಿಂದುವಾಗಿದ್ದು, ೨೦೨೦-೨೧ ನೇ ಸಾಲಿನ  ಆಡಿಟ್ ವರದಿಯಲ್ಲಿ ‘ಎ’ ಶ್ರೇಣಿ  ಯನ್ನು ಹೊಂದಿರುತ್ತದೆ.  ೨೦೨೦ ನೇ ಇಸವಿಯಿಂದಲೂ ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಿಸ್ವಾರ್ಥದಿಂದ ಪಾರದರ್ಷಕ, ಪ್ರಾಮಾಣಿಕ ಆಡಳಿತವನ್ನು ನಡೆಸಿ ಬ್ಯಾಂಕನ್ನು ರಾಜ್ಯದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇನೆ

    Sri. D. S. Suresh

    President