13, ಮಾರ್ಚ್-2026

    ಶ್ರೀ ಡಾ. ರವಿ ಸಿ. ಟಿ.

    ಮಾನ್ಯ ಶಾಸಕರು. ವಿಧಾನ ಪರಿಷತ್ತು & ಅಧ್ಯಕ್ಷರು. ಡಿ.ಸಿ.ಸಿ ಬ್ಯಾಂಕ್ ನಿ.,

    ಅಧ್ಯಕ್ಷರ ಸಂದೇಶ

    ಜಿಲ್ಲೆಯ ರೈತರ ಜೀವನಾಡಿಯಾದ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ೧೯೫೫ ರಲ್ಲಿ ಆರಂಭವಾಗಿ ೦೭ ದಶಕಗಳಿಂದ ಜಿಲ್ಲೆಯ ರೈತರಿಗೆ ಮತ್ತು ಗ್ರಾಹಕರಿಗೆ ಉತ್ಕೃಷ್ಠ ಹಾಗೂ ಅನನ್ಯ ಸೇವೆ ಸಲ್ಲಿಸಿ, ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿ, ಜಿಲ್ಲೆಯ ಸಹಕಾರಿಗಳ ಕನಸು , ದೂರದೃಷ್ಠಿತ್ವ ನಿರಂತರ ಫಲ ನೀಡುತ್ತಲಿದೆ..

    ಜಿಲ್ಲೆಯಲ್ಲಿ ೨೮ ಶಾಖೆಗಳಲ್ಲಿ ಅತ್ಯಾಧುನಿಕ ತಂತ್ರಾಜ್ಞಾನದ ಮೂಲಕ ಕೋರ್ ಬ್ಯಾಂಕಿಂಗ್
    ವ್ಯವಸ್ಥೆಯಡಿ ಸಂಪೂರ್ಣ ಗಣಕೀಕರಣಗೊಂಡು ತ್ವರಿತ ಸೇವೆ ನೀಡಲಾಗುತ್ತಿದೆ. ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್(ಯುಪಿಐ) ಮುಖಾಂತರ ಪೋನ್ ಪೇ/ಪೇಟಿಎಂ/ಭೀಮ್ ಇತ್ಯಾದಿ ಸೇವೆ ಯಶಸ್ವಿಯಾಗಿ ಜಾರಿಗೊಳಿಸಲಾಗಿರುತ್ತದೆ. ಆಧುನಿಕ ಬ್ಯಾಂಕಿಂಗ್ ಸೇವೆಗಳಾದ ಮೊಬೈಲ್ ಬ್ಯಾಂಕಿಂಗ್ , ಎ.ಟಿ.ಎಂ ಡೆಬಿಟ್ ಕಾರ್ಡ್,  ಎಸ್.ಎಂ.ಎಸ್ ಅಲರ್ಟ್ ಇತ್ಯಾದಿ ಸೇವೆ ನೀಡುತ್ತಲಿದೆ.

    ಬ್ಯಾಂಕ್ ಜನವರಿ ೨೦೨೬ ಅಂತ್ಯಕ್ಕೆ ರೂ ೧೪೭೬.೯೪ ಕೋಟಿ ಠೇವಣಿ ಹೊಂದಿದ್ದು, ರೂ ೧೬೪೫.೧೩ ಕೋಟಿ ಸಾಲ/ಮುಂಗಡ ನೀಡಿದ್ದು, ಬ್ಯಾಂಕಿನ ದುಡಿಯುವ ಬಂಡವಾಳ ರೂ ೨೨೯೫ ಕೋಟಿ ಇರುತ್ತದೆ.

    ಜನವರಿ ೨೦೨೬ ರ ಅಂತ್ಯಕ್ಕೆ ಸಾಲ ವಸೂಲಾತಿಯಲ್ಲಿ ಕೃಷಿ ಸಾಲ ಶೇ ೯೯.೫೬ % ಮತ್ತು ಕೃಷಿಯೇತರ ಸಾಲ  ಶೇ ೯೧.೦೮% ಒಟ್ಟು ಶೇ ೯೬.೬೫ ವಸೂಲಾಗಿದ್ದು, ಮಾರ್ಚ್ ಅಂತ್ಯಕ್ಕೆ ಶೇ ೯೯ % ರ ಸಾಧನೆಗೆ ಕಾರ್ಯಯೋಜನೆ ಮಾಡಲಾಗಿದೆ..

    ಜಿಲ್ಲೆಯ ರೈತರಿಗೆ ಶೂನ್ಯಬಡ್ಡಿ ದರದಲ್ಲಿ ಕೃಷಿ ಅಲ್ಪಾವಧಿ ಸಾಲ, ಶೇ ೩ ರ ಬಡ್ಡಿ ದರದಲ್ಲಿ ಕೃಷಿ ಮಧ್ಯಮಾವಧಿ ಸಾಲ, ಗ್ರಾಹಕರಿಗೆ ವಿವಿಧ ಕೃಷಿಯೇತರ ಸಾಲ, ಬೆಳೆ ವಿಮೆ ಯೋಜನೆ, ಕೇಂದ್ರ ಸರ್ಕಾರದ ಜನ ಸುರಕ್ಷಾ ಯೋಜನೆಗಳಾದ ಪಿ.ಎಂ.ಜೆ.ಜೆ.ಬಿ.ವೈ/ಪಿ.ಎA.ಎಸ್.ಬಿ.ವೈ ಗಳ ಸೇವೆ ಒದಗಿಸುತ್ತಿದೆ.

    ಸಹಕಾರಿ ಕ್ಷೇತ್ರವು ಸಾಮಾಜಿಕ ಜವಬ್ದಾರಿ ಮತ್ತು ಅಭಿವೃದ್ದಿಯ ಕ್ಷೇತ್ರವಾಗಿದ್ದು, ಹೊಸ ಆಡಳಿತ ಮಂಡಲಿಯ ಸಂಪೂರ್ಣ ಸಹಕಾರದೊಂದಿಗೆ ಸಮರ್ಥವಾಗಿ ನಿರ್ವಹಿಸಿ ಜಿಲ್ಲೆಯ ರೈತರಿಗೆ ಮತ್ತು ಗ್ರಾಹಕರಿಗೆ ನೆರವಾಗುವ ಭರವಸೆ ಹಾಗೂ ವಿಶ್ವಾಸ ನಮಗಿದೆ.

    ಬ್ಯಾಂಕಿನ ಎಲ್ಲಾ ಸಾಧನೆಗೆ  ಹಿಂದೆ ಕರ್ತವ್ಯ ನಿರ್ವಹಿಸಿದ ಅಧ್ಯಕ್ಷರುಗಳು, ಉಪಾಧ್ಯ್ಯಕ್ಷರುಗಳು ಮತ್ತು ಆಡಳಿತ ಮಂಡಲಿ ಸದಸ್ಯರು, ಸಹಕಾರಿ ಸಂಸ್ಥೆಗಳು, ಜಿಲ್ಲೆಯ ಎಲ್ಲಾ ಸಹಕಾರಿ ಬಂಧುಗಳು ಕಾರಣೀಭೂತರಾಗಿದ್ದು, ಕೃತಜ್ಷತೆಯನ್ನು ಸಲ್ಲಿಸುತ್ತೇವೆ. ಮುಂದೆಯೂ ಜಿಲ್ಲೆಯ ಸರ್ವ ಸಹಕಾರಿಗಳು, ಬ್ಯಾಂಕಿನ ಆಡಳಿತ ಮಂಡಲಿ ಸದಸ್ಯರು, ಸಹಕಾರಿ ಸಂಸ್ಥೆಗಳು, ಬ್ಯಾಂಕಿನ ನೌಕರ ವರ್ಗದ ವಿಶ್ವಾಸದಿಂದ ಬ್ಯಾಂಕನ್ನು ರಾಜ್ಯದಲ್ಲಿಯೇ ಅತ್ಯುತ್ತಮ ಸಹಕಾರಿ ಬ್ಯಾಂಕಿನ ಸ್ಥಾನಕ್ಕೆ ಬ್ಯಾಂಕನ್ನು ಕೊಂಡೊಯ್ಯಲು ಅಭಿಲಾಷೆಯನ್ನು ಹೊಂದಲಾಗಿದ್ದು, ಶಿಸ್ತಿಬದ್ದ ಕಾರ್ಯಯೋಜನೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಕಾರ್ಯಗತಗೊಳಿಸಲಾಗುವುದು.

    ಜೈ ಸಹಕಾರ

    (ಶ್ರೀ ಡಾ. ರವಿ ಸಿ. ಟಿ.)                       

    ಮಾನ್ಯ ಶಾಸಕರು. ವಿಧಾನ ಪರಿಷತ್ತು

    & ಅಧ್ಯಕ್ಷರು. ಡಿ.ಸಿ.ಸಿ ಬ್ಯಾಂಕ್ ನಿ.,