ಸ್ಥಿರ ಠೇವಣಿಗಳು
ಸಹಕಾರಿ ಸಂಸ್ಥೆಗಳು, ಇತರೇ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ನಿಯಮಿತ ಕಂಪನಿಗಳು, ಹಿಂದೂ ಅವಿಭಕ್ತ ಕುಟುಂಬ, ಟ್ರಸ್ಟ್, ಸರಕಾರಿ ಹಾಗೂ ಅರೇ ಸರಕಾರಿ ಇಲಾಖೆಗಳ ಹೆಸರಿನಲ್ಲಿ ತೆರೆಯಬಹುದಾಗಿರುತ್ತದೆ..
ಖಾತೆಗಳನ್ನು ತೆರೆಯಲು ಬೇಕಾಗಿರುವ ದಾಖಲಾತಿಗಳು
1.ಸಹಕಾರಿ ಸಂಸ್ಥೆಗಳು, ಇತರೇ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ನಿಯಮಿತ ಕಂಪನಿಗಳು, ಹಿಂದೂ ಅವಿಭಕ್ತ ಕುಟುಂಬ, ಟ್ರಸ್ಟ್, ಸರಕಾರಿ ಹಾಗೂ ಅರೇ ಸರಕಾರಿ ಇಲಾಖೆಗಳ ಹೆಸರಿನಲ್ಲಿ.
- ಬ್ಯಾಂಕಿನಿಂದ ನಿಗದಿತ ನಮೂನೆಯಲ್ಲಿ ನೀಡಲಾದ ಖಾತೆ ತೆರೆಯುವ ಫಾರಂ
- ವ್ಯವಹಾರ ಮಾಡಲು ಸ್ಥಳೀಯ ಸಂಸ್ಥೆಯಿಂದ ನೀಡಲಾದ ಅನುಮತಿ ಪತ್ರ
- ಪಾಲುದಾರಿಕ ಪತ್ರ
- ಆಡಳಿತ ಮಂಡಳಿ ತೀರ್ಮಾನ ಪತ್ರ ಹಾಗೂ ಸಂಯೋಜನಾ ಪತ್ರ
- ಪರವಾನಗಿ ಪತ್ರ
- ಪಾನ್ ಕಾರ್ಡ್ ಜೆರಾಕ್ಸ್
- ಖಾತೆಯಲ್ಲಿ ವ್ಯವಹರಿಸುವವರ ಅಧಿಕೃತ ಗುರುತಿನ ಚೀಟಿ, 2 ಫೋಟೋಗಳು ಹಾಗೂ ಪಾನ್ ಕಾರ್ಡ್ ಸಂಖ್ಯೆ
- ಬ್ಯಾಂಕಿನಿಂದ ಕೇಳಲಾಗುವ ಇತರೇ ದಾಖಲೆಗಳು
2. ವ್ಯಕ್ತಿಗಳಿಗೆ
- ಬ್ಯಾಂಕಿನಿಂದ ನಿಗದಿತ ನಮೂನೆಯಲ್ಲಿ ನೀಡಲಾದ ಖಾತೆ ತೆರೆಯುವ ಫಾರಂ
- 2 ಪಾಸ್ ಪೋರ್ಟ್ ಅಳತೆಯ ಪೋಟೋಗಳು
- ಆಧಾರ್ ಕಾರ್ಡ್ ಜೆರಾಕ್ಸ್
- ಪಾನ್ ಕಾರ್ಡ್ ಜೆರಾಕ್ಸ್
- ವಾಸಸ್ಥಳ ದೃಢೀಕರಣ ಪತ್ರ, ಪಾಸ್ ಪೋರ್ಟ್, ವಾಹನ ಚಾಲನೆ ಪರವಾನಗಿ, ಮತದಾನದ ಗುರುತಿನ ಚೀಟಿ
3.ಖಾತೆ ತೆರೆಯುವಿಕೆಯ ಉಪಯೋಗ ಹಾಗೂ ವೈಶಿಷ್ಟ್ಯಗಳು
- ವ್ಯಕ್ತಿಗತ ಖಾತೆಗಳಿಗೆ ವಾರಸುದಾರರ ಹೆಸರು ಪಡೆಯುವಿಕೆ ವ್ಯವಸ್ಥೆ
- ಜಂಟಿ ಖಾತೆ ತೆರೆಯುವಿಕೆ
- ಅಪ್ರಾಪ್ತರ ಹೆಸರಿನಲ್ಲಿ ಖಾತೆ ತೆರೆಯುವಿಕೆ
- ಕನಿಷ್ಠ ರೂ. 1000/ ಗರಿಷ್ಠ ಮೊತ್ತಕ್ಕೆ ಮಿತಿ ಇರುವುದಿಲ್ಲಾ
- ಕನಿಷ್ಠ 12 ತಿಂಗಳು ಗರಿಷ್ಠ 120 ತಿಂಗಳು
- ಆಯಾ ಅವಧಿಗನುಗುಣವಾಗಿ ಅನ್ವಯವಾಗುವ ಬಡ್ಡಿ ದರಗಳು
- ವರ್ಷಾಂತ್ಯಕ್ಕೆ ಬಡ್ಡಿ ಪಡೆಯಲು ಬಯಸುವವರಿಗೆ ಆಶಾದಾಯಕ ಠೇವಣಿ. ಈ ಯೋಜನೆಯಡಿಯಲ್ಲಿ ಪ್ರತೀ 3 ತಿಂಗಳಿಗೊಮ್ಮೆ ಬಡ್ಡಿಯು ಅಸಲಿಗೆ ಆಕರಣೆ ಆಗಲಿರುತ್ತದೆ. ಇದರಿಂದ ಠೇವಣಿದಾರರಿಗೆ ಹೆಚ್ಚಿನ ಬಡ್ಡಿ ದೊರೆಯಲಿದೆ.
- 1 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಠೇವಣಿ ಇರಿಸಿದ ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿದರವನ್ನು ಪಾವತಿಸಲಾಗುವುದು.
- 1 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಠೇವಣಿ ಇರಿಸಿದ ದೈಹಿಕವಾಗಿ ಅಂಗವಿಕಲ ವ್ಯಕ್ತಿಗೆ 1.00% ಹೆಚ್ಚುವರಿ ಬಡ್ಡಿದರವನ್ನು ಪಾವತಿಸಲಾಗುವುದು.
- ಆಯಾ ದಿನ ಠೇವಣಿಸಿದ ಮೊತ್ತದ ಹಾಗೂ ನವೀಕರಣದ ರಶೀದಿಯನ್ನು ಅದೇ ದಿನ ನೀಡಲಾಗುವುದು
- ಆದಾಯ ತೆರಿಗೆ ಅನ್ವಯವಾಲಿದೆ
- ಸದರಿ ಉಳಿತಾಯದ ಮೇಲೆ ಶೇ 80 ರಷ್ಟು ಸಾಲ ಪಡೆಯಬಹುದಾಗಿರುತ್ತದೆ
- ಅವಧಿಗೆ ಮುನ್ನ ಖೈದು ಮಾಡಲು ಇಚ್ಚಿಸಿದಲ್ಲಿ ಶೇ. 1% ದಂಡ ಹಾಗೂ ನಿಗದಿಪಡಿಸಿದ ಬಡ್ಡಿಗಿಂತ ಶೇ. 1% ಬಡ್ಡಿ ಕಡಿಮೆ ಪಾವತಿ.
- ವಾಯಿದೆ ಮುಗಿದ ಠೇವಣಿಗಳಿಗೆ ವಾಯಿದೆ ದಿನಾಂಕದಿಂದ ಮುಂದಿನ ದಿನಾಂಕದವರೆಗೆ ಸ್ವಯಂ ನವೀಕರಣ ವ್ಯವಸ್ಥೆ ಇರುತ್ತದೆ.