10, ನವೆಂಬರ್-2024

    ಚಿಕ್ಕಮಗಳೂರು ಜಿಲ್ಲಾ ಸಹಕಾರ ಬ್ಯಾಂಕ್‌ಗೆ ಸುಸ್ವಾಗತ

    ಕರ್ನಾಟಕ ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಭೌಗೋಳಿಕವಾಗಿ ಒಂದು ಚಿಕ್ಕ ಹಾಗೂ ಅತ್ಯಂತ ಸುಂದರ ಪ್ರಕೃತಿ ಸೌಂದರ್ಯ ಹೊಂದಿದ್ದು, ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿದೆ. 08 ತಾಲ್ಲೋಕುಗಳಿದ್ದು, ಪಶ್ಚಿಮದ ಬಹುಭಾಗವು ಪರ್ವತ ಶೇಣಿಗಳಿಂದ ಕೂಡಿದ್ದು,ಮಲೆನಾಡಾಗಿದ್ದರೆ, ಪೂರ್ವದ ಸ್ವಲ್ಪ ಭಾಗ ಬಯಲು ಪ್ರದೇಶವಾಗಿದ್ದು,ರಾಜ್ಯದಲ್ಲೇ ಅತ್ಯಂತ ಎತ್ತರದ ಮೇರು ಪರ್ವತಗಳು,ಗಿರಿ ಶಿಖರಗಳು,ಅಪಾರ ಜಲ ಸಂಪತ್ತು, ಅರಣ್ಯ ಸಂಪತ್ತು ಹೊಂದಿರುತ್ತದೆ. ಪ್ರಮುಖವಾಗಿ ಕಾಫೀ,ಮೆಣಸು,ತೆಂಗು,ಅಡಿಕೆಯಂತ ವಾಣಿಜ್ಯ ಬೆಳೆಯೊಂದಿಗೆ ಆಹಾರದಾನ್ಯ, ಎಣ್ಣೆ ಕಾಳುಗಳನ್ನು ಬೆಳೆಯಲಾಗುತ್ತಿದೆ.  ವರ್ಷದ ಬಹುಕಾಲ ಆಹ್ಲಾದಕರ ವಾತಾವರಣದಿಂದಾಗಿ ಪ್ರಪಂಚದಲ್ಲಿಯೇ 2 ನೇ ವಾಸಯೋಗ್ಯ ಪ್ರದೇಶವೆಂಬ ಹೆಗ್ಗಳಿಕೆಯೂ ಸೇರಿದೆ.

    ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ದಿನಾಂಕ:25-02-1955 ರಂದು ನೋಂದಣಿ ಕ್ರಮ ಸಂಖ್ಯೆ:ಎ.ಆರ್.ಸಿ 213/25-2-55 ರಡಿ ಸ್ಥಾಪನೆಯಾಗಿ, ಭಾರತೀಯ ರಿಸರ್ವ್ ಬ್ಯಾಂಕಿನ ಪರವಾನಗಿ ಸಂಖ್ಯೆ:ಆರ್.ಪಿ.ಸಿ.ಡಿ(ಬಿಜಿ)ಡಿ.ಸಿ.ಸಿಬಿ 21/2011-12 ರಂತೆ ಪರವಾನಗಿ ಪಡೆದು ಜಿಲ್ಲೆಯಾದ್ಯಂತ 28 ಶಾಖೆಗಳ ಮೂಲಕ ರೈತರ, ಜಿಲ್ಲೆಯ ಜನರ ಜೀವನಾಡಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆ. ನಿರಂತರ ಲಾಭ ಗಳಿಕೆ ಹಾಗೂ ರಾಜ್ಯದಲ್ಲಿ ಉತ್ತಮ ಕಾರ್ಯನಿರ್ವಹಣೆಗೆ “ಎ” ಗ್ರೇಡ್ ಎಂದು ಗುರುತಿಸಿರುವುದು ಬ್ಯಾಂಕಿನ ಹೆಗ್ಗಳಿಕೆ.

    ಬ್ಯಾಂಕಿನ ಎಲ್ಲಾ ಶಾಖೆಗಳು ಸಂಪೂರ್ಣ ಗಣಕೀಕರಣಗೊಂಡು ಕೋರ್ ಬ್ಯಾಂಕಿಂಗ್ನಡಿ ಕಾರ್ಯನಿರ್ವಹಿಸುತ್ತಿದ್ದು, ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳಾದ ಎ.ಟಿ.ಎಂ ಡೆಬಿಟ್ ಕಾರ್ಡ್, ಆರ್.ಟಿ.ಜಿ.ಎಸ್/ ನೆಫ್ಟ್. ಮೊಬೈಲ್ ಬ್ಯಾಂಕಿಂಗ್ ಹೊಂದಿ ಗ್ರಾಹಕರಿಗೆ ಉತ್ಕøಷ್ಟ ಬ್ಯಾಂಕಿಂಗ್ ಸೇವೆ ನೀಡುತ್ತಲಿದೆ.

    ಆಕರ್ಷಕ ಬಡ್ಡಿ ದರದ ಠೇವಣಿ ಯೋಜನೆಗಳು, ಸಕಾಲದಲ್ಲಿ ರೈತರು ಹಾಗೂ ಗ್ರಾಹಕರಿಗೆ ವಿವಿಧ ರೀತಿಯ ಕೃಷಿ ಮತ್ತು ಕೃಷಿಯೇತರ ಸಾಲ ವಿತರಿಸಲಾಗುತ್ತಿದೆ. ಸೇಫ್ ಲಾಕರ್, ಪಿಎಂಎಸ್ಬಿವೈ ಎಸ್.ಎಂ.ಎಸ್ ಅಲರ್ಟ್ ಮುಂತಾದ ಸೌಲಭ್ಯಗಳೂ ಸಹಾ ಕಲ್ಪಿಸಲಾಗಿದೆ.   

    ಬ್ಯಾಂಕ್ ಪ್ರಾರಂಭವಾದ 1954-55 ನೇ ವರ್ಷದಲ್ಲಿ ರೂ.4368=00 ಠೇವಣಿ ಮತ್ತು ರೂ 11235=00 ಸಾಲ ವಿತರಣೆಯೊಂದಿಗೆ ಪ್ರಾರಂಭವಾದ ಬ್ಯಾಂಕು ಇಂದು ರೂ 1063=00 ಕೋಟಿ ಠೇವಣಿ ಹಾಗೂ ರೂ 1088=00 ಕೋಟಿ ಸಾಲ ವಿತರಿಸಿ ವ್ಯವಹರಿಸುತ್ತಿರುವುದು ಬ್ಯಾಂಕಿನ ಬೆಳವಣಿಗೆಗೆ ಸಾಕ್ಷಿ.,

    ಬ್ಯಾಂಕಿನ ಷೇರು ಬಂಡವಾಳ ರೂ 48.46 ಕೋಟಿ, ಹೂಡಿಕೆ ರೂ 401.23 ಕೋಟಿ ಹೊಂದಿದ್ದು, ಪರಿಣಾಮಕಾರಿ ವಸೂಲಾತಿಯಿಂದಾಗಿ ಎನ್.ಪಿ.ಎ ಕೇವಲ ಶೇ 3.01 ರಷ್ಟಿದ್ದು, ಲಾಭ ರೂ 5.10 ಕೋಟಿ ಹಾಗೂ ಬ್ಯಾಂಕಿನ ದುಡಿಯುವ ಬಂಡವಾಳ ರೂ _____ ಕೋಟಿ ಇದ್ದು, ಬ್ಯಾಂಕಿನ ಪ್ರಗತಿ ಪರಿಗಣಿಸಿ ಹಲವು ಬಾರಿ ನಬಾರ್ಡ್ ಹಾಗೂ ಅಫೆಕ್ಸ್ ಬ್ಯಾಂಕ್ ಉತ್ತಮ ಬ್ಯಾಂಕ್ ಎಂದು ಗುರಿತಿಸಿ ಪ್ರಶಸ್ತಿ ನೀಡಿ ಗೌರವಿಸಿರುವುದು ಬ್ಯಾಂಕಿನ ಹೆಗ್ಗಳಿಕೆ.

    ಜಿಲ್ಲೆಯ ರೈತರ, ಗ್ರಾಹಕರ ವಿಶ್ವಾಸ, ನಂಬಿಕೆ, ಬ್ಯಾಂಕಿನ ಗೌರವಾನ್ವಿತ ಆಡಳಿತ ಮಂಡಳಿ ಮಾರ್ಗದರ್ಶನ, ಪರಿಣಾಮಕಾರಿ ಮೇಲ್ವಿಚಾರಣೆ, ಮಾನವ ಸಂಪನ್ಮೂಲ ಸಧ್ಬಳಕೆ, ನೌಕರ ವರ್ಗದವರ ನಿಷ್ಟೆ, ಪ್ರ್ರಾಮಾಣೀಕತೆ ಗಳಿಂದ ಬ್ಯಾಂಕ್ ಅಭಿವೃದ್ದಿಯ ಪ್ರಗತಿ ಪಥದಲ್ಲಿ ಸಾಗುತಿದ್ದು, ಚಿಕ್ಕಮಗಳೂರು ಜಿಲ್ಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಇಂದು ಕರ್ನಾಟಕ ರಾಜ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.

    ಪ್ರಶಸ್ತಿಗಳು

    ವರ್ಷಗಳ ಅನುಭವ

    ನಬಾರ್ಡ್ ಅವರಿಂದ ಬಹುಮಾನ

    ಶಾಖೆಗಳು

    ಸಹಕಾರಿ ಸಂಘಗಳು

    70 ವರ್ಷಗಳಿಂದ ಆಡಳಿತ ನಡೆಸುತ್ತಿದೆ

    ನಮ್ಮ ಬ್ಯಾಂಕ್ ಅನ್ನು 1955 ರಂದು ನೋಂದಾಯಿಸಲಾಗಿದೆ. ನಮ್ಮ ಬ್ಯಾಂಕ್ ಮುಖ್ಯ ಕಚೇರಿ ಚಿಕ್ಕಮಗಳೂರುನಲ್ಲಿದೆ, ಚಿಕ್ಕಮಗಳೂರು ಜಿಲ್ಲೆಯ ಸೇವಾ ಶಾಖೆ ಸೇರಿದಂತೆ ಅದರ 28 ಶಾಖೆಗಳನ್ನು ಹರಡಿದೆ. 66 ವರ್ಷಗಳಿಂದ ಬ್ಯಾಂಕ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.

    ಸೂಪರ್ ಪವರ್ ಆಡಳಿತ

    28+ ಶಾಖೆಗಳು

    1000+ ಸಹಕಾರಿ ಸಂಘಗಳು

    ವ್ಯವಸ್ಥೆಯಲ್ಲಿ ಬ್ಯಾಂಕಿಂಗ್‌ಗೆ ಪ್ರಸಿದ್ಧವಾಗಿದೆ

    Super Power Administration

    28 Branches

    1000+ Co-operative Societies

    Famous for Banking in the System